ಪರಿಚಯ:

1984 ರಲ್ಲಿ ಶ್ರೀ ಎಸ್.ಆರ್.ಪುಟ್ಟಣ್ಣ ಕಣಗಾಲ್ರವರ ಅಧ್ಯಕ್ಷತೆಯಲ್ಲಿ ಸ್ಥಾಪಿತವಾದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಭಾರತದಲ್ಲೇ ಮೊಟ್ಟಮೊದಲ ನಿರ್ದೇಶಕರ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಿನಿಂದ ಇಂದಿನವರೆವಿಗೂ ಯಶಸ್ವಿಯಾಗಿ ತನ್ನ ಕಾರ್ಯ ಚಟುವಟಿಕೆಯನ್ನು ನಡೆಸಿಕೊಂಡು ಬಂದಿರುವ ನಮ್ಮ ಸಂಘವು 34 ವಸಂತಗಳನ್ನು ಪೂರೈಸಿದ್ದು, ಹಲವಾರು ಪ್ರತಿಭಾವಂತ ಮತ್ತು ದಿಗ್ಗಜ ಚಲನಚಿತ್ರ ನಿರ್ದೇಶಕರನ್ನು ಒಳಗೊಂಡಿರುವುದು ವಿಶೇಷ ಮತ್ತು ಅವರೆಲ್ಲರ ಸಾಧನೆ ಯುವ ಮತ್ತು ನವ ನಿರ್ದೇಶಕರಿಗೆ ಸ್ಫೂರ್ತಿಯಾಗಿರುವುದೂ ಸತ್ಯ.

ನಮ್ಮ ಉದ್ದೇಶ:

ನಮ್ಮ ಸಂಘದ ಉದೇಶವು ಕರ್ನಾಟಕ ಚಲನಚಿತ್ರೋದ್ಯಮಕ್ಕೆ ಪೂರಕವಾಗಲು ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರಿಗೆ ಸಹಾಯಕವಾಗಲು ಸ್ಥಾಪಿಸಲಾಗಿದೆ,ನಮ್ಮ ಸಂಘವು ಹಲವಾರು ವರ್ಷಗಳಿಂದ ಅತ್ಯುತ್ತಮ ನಿರ್ದೇಶಕರಿಗೆ ಗೌರವಾರ್ಥವಾಗಿ ‘ಕನ್ಫಿಡಾ’ ಪ್ರಶಸ್ತಿಯನ್ನು ಪ್ರಧಾನಿಸುತ್ತ ಬಂದಿದೆ.ಕರ್ನಾಟಕ ಚಲನಚಿತ್ರ ನಿರ್ದೇಶಕರನ್ನು ಗೌರವಿಸುವುದು ಮತ್ತು ಅವರಿಗೆ ಸಹಾಯಕವಾಗುವುದು ನಮ್ಮ ಮೂಲ ಉದ್ದೇಶವಾಗಿದೆ.

  • Lorem
  • Ipsum
  • Dolor
  • Sit
  • Amet
  • Nullam

ನಮ್ಮ ಕಾರ್ಯಗಳು:

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಹಲವಾರು ವರ್ಷಗಳಿಂದ ಚಲನಚಿತ್ರ ನಿರ್ದೇಶನ, ಅಭಿನಯ, ನೃತ್ಯ ಮತ್ತು ಸಂಗೀತ ತರಬೇತಿಗಳನ್ನು ನಡೆಸಿಕೊಂಡು ಬಂದಿದೆ ಈ ವರ್ಷವೂ ಸಹ ತರಬೇತಿಗಳು ನಡೆಯುತ್ತಿದ್ದು ಈ ಕೆಳಕಂಡಂತಿವೆ.
1) ಚಲನಚಿತ್ರ ನಿರ್ದೇಶನ (4 ತಿಂಗಳು)
2) ಅಭಿನಯ (4 ತಿಂಗಳು)
3) ನೃತ್ಯ (3 ತಿಂಗಳು)
4) ಸಂಗೀತ (3 ತಿಂಗಳು)
ಈ ತರಬೇತಿಗಳನ್ನು ಪಡೆಯಲು ಆಸಕ್ತಿವುಳ್ಳವರು ನಮ್ಮನ್ನು ಸಂಪರ್ಕಿಸಿ.

ಗ್ಯಾಲರಿ

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ವತಿಯಿಂದ ನಡೆದ ಹಲವಾರು ಕಾರ್ಯಕ್ರಮಗಳ ಅತ್ಯುತ್ತಮ ಕ್ಷಣಗಳ ಚಿತ್ರಪಟಗಳು ಇಂತಿವೆ.

ಸಂಪರ್ಕಿಸಿ

ಇದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿರುವ ವಿವಿಧ ಆಯ್ಕೆಗಳ ಮುಖಾಂತರ ನೀವು ನಮ್ಮನ್ನು ಸಂಪರ್ಕಿಸಬಹುದು